ಅಯೋಧ್ಯೆಯ ಬೇಗಂ

ಅಯೋಧ್ಯೆಯ ನವಾಬ ಅಸಾ ಉದ್ದೌಲನ ತಾಯಿ. ಬ್ರಿಟಿಷರ ಸಹಾಯದಿಂದ ನವಾಬ ಪದವಿಗೇರಿದ್ದ ಅಸಾ ಉದ್ದೌಲ ತಾನು ಬ್ರಿಟಿಷರಿಗೆ ಕೊಡಬೇಕಾಗಿದ್ದ ಹಣವನ್ನು ಕೊಡಲಾಗದೆ ತನ್ನ ತಾಯಿಯಿಂದ ಅದನ್ನು ವಸೂಲು ಮಾಡುವಂತೆ ಗೌರ್ನರಿಗೆ ಸೂಚನೆ ಇತ್ತ. ಮನಸ್ಸಿಲ್ಲದಿದ್ದರೂ ಗೌರ್ನರ್ ವಾರನ್ ಹೇಸ್ಟಿಂಗ್ಸ್ ಅದಕ್ಕೆ ಒಪ್ಪಿದ (1781). ಹಣ ಬೇಗಂಳಿಂದ ವಸೂಲಾಯಿತು.

	ಹೇಸ್ಟಿಂಗ್ಸನ ಮೇಲೆ ಹೊರಿಸಿದ ಆಪಾದನೆಗಳಲ್ಲಿ ಬೇಗಂಳ ಸುಲಿಗೆಯೂ ಒಂದು ಮುಖ್ಯ ಅಂಶವಾಗಿತ್ತು.

(ಬಿ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ